Church Mass Timings

Monday to Saturday: 6.30 AM

Thursday : 5.00 PM Adoration to the Bl. Sacrament 5.30 PM Mass followed by Infant Jesus Novena

Friday : 6.30 AM & 5.30 PM

Saturday : 6.30 AM & 5.00 PM

Sunday : 7.15 AM & 9.15AM 11.30 Mass in Malayalam

   

St. Mary's Kannada Primary

 
 

 

     
 
 
         
         
     
     
       
 

ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

 
     
     
     
     
       
 

ಸಾರ್ವಜನಿಕ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಛೇರಿ,ರಜತಾದ್ರಿ,ಮಣಿಪಾಲ ಹಾಗೂ ಸೈಂಟ್ ಮೇರಿಸ್ ಹಿ.ಪ್ರಾ.ಶಾಲೆ,ಉಡುಪಿ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ದಿನಾಂಕ ೫/೦೮/೨೦೧೫ ರಂದು, ಜಿಲ್ಲಾ ಒಳಾಂಗಣ ಕ್ರೀಡಾಂಗಣ ಅಜ್ಜರಕಾಡಿನಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭವು ವಂದನೀಯ ಡಾ|ಲಾರೆನ್ಸ್ ಸಿ.ಡಿ'ಸೋಜರವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಡುಪಿ ಹಾಗೂ ದ.ಕ.ಜಿಲ್ಲೆಯ ಮೀನುಗಾರಿಕಾ ಫೆಡರೇಶನ್‌ನ ಅಧ್ಯಕ್ಷರಾದ ಶ್ರೀ ಯಶಪಾಲ್ ಸುವರ್ಣರವರು ಉದ್ಘಾಟಿಸಿದರು.ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶ್ರೀ ಮಧುಕರ್‌ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಉದ್ಯಮಿ ಶ್ರೀ ಹರೀಶ್ ಕಿಣಿಯವರು ಕ್ರೀಡಾಳುಗಳಿಗೆ ಶುಭ ಹಾರೈಸಿದರು. ತಾಲೂಕು ದೈಹಿಕ ಶಿಕ್ಷಣಾ

ಧಿಕಾರಿಗಳಾದ ಶ್ರೀ ಬಸವರಾಜ್, ಶ್ರೀ ದತ್ತಾತ್ರೇಯ ನಾಯಕ್, ಶ್ರೀ ಬಾಬು ಪೂಜಾರಿ, ಶ್ರೀ ಭುಜಂಗ ಶೆಟ್ಟಿ, ಶ್ರೀ ರಾಜು ಪೂಜಾರಿ, ಸಂತ ಮೇರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೊಯ್ಸ್ ಡೆಸಾ, ಉಡುಪಿ ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರು ಶ್ರೀ ಸತೀಶ್ ಸಾಲ್ಯಾನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಶ್ರೀ ಶೇಖರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಕ್ಲಾರಾ ಮಥಾಯಸ್ ಸ್ವಾಗತಿಸಿದರು. ಶಿಕ್ಷಕ ಹೆರಾಲ್ಡ್ ಆರ್. ಡಿ'ಸೋಜ ವಂದಿಸಿದರು. ಶಿಕ್ಷಕಿ ಜೆಸಿಂತ ಎಂ.ಡಿ'ಅಲ್ಮೇಡಾ ಕಾರ್‍ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಎಸೋಸಿಯೇಶನ್‌ನ ಉಪಾಧ್ಯಕ್ಷರಾದ ಶ್ರೀ ಪ್ರಕಾಶ್ ಕೊಡವೂರು ವಿಜೇತರಿಗೆ ಬಹುಮಾನ ವಿತರಿಸಿದರು.ಜಿಲ್ಲಾ ಹಾಗೂ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

ಇನ್‌ಸ್ಪಾಯರ್ ಅವಾರ್ಡ್ ಇಲಾಖೆಯಿಂದ ಆಯೋಜಿಸಲ್ಪಟ್ಟ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಎಸ್.ಚೇತನ್ ಮತ್ತು ಪೂರ್ಣಚಂದ್ರಪ್ರಭಾ ಭಾಗವಹಿಸಿದ್ದರು. ಎಸ್.ಚೇತನ್ ನವೀನ ಮಾದರಿಯಾದ ಗುರುತ್ವಾಕರ್ಷಣೆ ಶಕ್ತಿಯಿಂದ ವಿದ್ಯುತ್ ತಯಾರಿಕೆಯಲ್ಲಿ ತಾಲೂಕು ಮಟ್ಟದಿಂದ ಆಯ್ಕೆಯಾಗಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಪೂರ್ಣಚಂದ್ರಪ್ರಭಾ ಮೋದಿಯ ಕನಸಿನ ಕೂಸಾದ ಸ್ಮಾರ್ಟ್ ಸಿಟಿಯ ಮಾದರಿ ತಯಾರಿಸಿ ಜಿಲ್ಲಾಮಟ್ಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾಳೆ.

 
         
 

ಸೈಂಟ್ ಮೇರಿಸ್ ಹಿ.ಪ್ರಾ. ಶಾಲೆಯಲ್ಲಿ ಪ್ರಾರಂಭೋತ್ಸವ

ದಿನಾಂಕ 01.06.2015 ರಂದು ಸೈಂಟ್ ಮೇರಿಸ್ ಹಿ.ಪ್ರಾ.ಶಾಲೆಯಲ್ಲಿ ಸಂಚಾಲಕರಾದ ಅತಿ ವಂದನೀಯ ಫ್ರೆಡ್ ಮಸ್ಕರೇನ್ಹಸ್‌ರವರ ಅಧ್ಯಕ್ಷತೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಪ್ರಾರ್ಥನಾ ವಿಧಿಯ ಮೂಲಕ ಕಾರ್ಯಕ್ರಮ ಆರಂಭಿಸಿ, ದೀಪ ಬೆಳಗಿಸುವುದರ ಮೂಲಕ 2015-16ನೇ ಶೈಕ್ಷಣಿಕ ವರ್ಷವನ್ನು ಉದ್ಘಾಟಿಸಲಾಯಿತು. ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಬೊನಿಫಾಸ್ ಡಿಸೋಜಾರವರು ಸರಕಾರ ನೀಡಿದ ಪಠ್ಯಪುಸ್ತಕ ಹಾಗೂ ದಾನಿಗಳು ನೀಡಿದ ಸಮವಸ್ತ್ರ ವಿತರಿಸಿದರು. ಸೈಂಟ್ ವಿನ್ಸೆಂಟ್ ಡಿಪಾವ್ಲ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಗ್ರೇಶಿಯನ್ ಬೊತೆಲ್ಲೊರವರು ಉಚಿತ ನೋಟ್ಸ್ ಪುಸ್ತಕಗಳನ್ನು ವಿತರಿಸಿದರು. ಮುಖ್ಯ ಶಿಕ್ಷಕಿ ಕ್ಲಾರಾ ಮಥಾಯಸ್‌ರವರು ಸ್ವಾಗತಿಸಿದರು. ಶಿಕ್ಷಕಿ ಲೋನ ಗ್ಲೋರಿಯಾ ಲುವಿಸ್ ವಂದಿಸಿದರು. ಶಿಕ್ಷಕಿ ಜೆಸಿಂತ ಅಲ್ಮೇಡಾರವರು ಕಾರ್ಯಕ್ರಮ ನಿರೂಪಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಶೇಖರ್ ಪೂಜಾರಿ ಉಪಸ್ಥಿತರಿದ್ದರು.

*********************************************

ವಿಶೇಷ ದಾಖಲಾತಿ ಆಂದೋಲನ

ದಿನಾಂಕ 30.06.2015 ರಂದು ಅಜ್ಜರಕಾಡು ವಾರ್ಡಿನಲ್ಲಿ ಮುಖ್ಯ ಶಿಕ್ಷಕಿ ಹಾಗೂ ಸಹ ಶಿಕ್ಷಕರು ಸೇರಿ ವಿಶೇಷ ದಾಖಲಾತಿ ಆಂದೋಲನವನ್ನು ಮಾಡಲಾಯಿತು. 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳು ಶಾಲೆಗೆ ಹೋಗುತ್ತಾರೆಯೇ ಎಂದು ವಿಚಾರಿಸಿ ಖಾತ್ರಿ ಪಡಿಸಿಕೊಳ್ಳಲಾಯಿತು. ನಮ್ಮ ವಾರ್ಡಿನ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿ ಶಾಲೆಗೆ ಹೋಗುತ್ತಿದ್ದಾರೆ. ಶಾಲೆಯಿಂದ ಹೊರಗುಳಿದ ಯಾವ ಮಗುವೂ ನಮಗೆ ಸಿಗಲಿಲ್ಲ.

************************************************

ಸೈಂಟ್ ಮೇರಿಸ್ ಹಿ.ಪ್ರಾ. ಶಾಲೆಯಲ್ಲಿ ಮೌಲ್ಯ ಶಿಕ್ಷಣ ಶಿಬಿರ

ದಿನಾಂಕ 22.07-2015 ರಂದು ಸೈಂಟ್ ಮೇರಿಸ್ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ದಿನದ ಮೌಲ್ಯ ಶಿಕ್ಷಣ ಶಿಬಿರ ನಡೆಯಿತು. ವಂದನೀಯ ಅನಿಲ್ ಸುನಿಲ್ ಡಿಸೋಜಾರವರು ಶಿಬಿರವನ್ನು ಉದ್ಘಾಟಿಸಿ, ಜೀವನ ಮೌಲ್ಯಗಳನ್ನಿ ನೈಜ ಉದಾಹರಣೆಗಳ ಮೂಲಕ ತಿಳಿಸಿದರು. ಸಂಪನ್ಮೂಲ ವ್ಯಕ್ತಿ ವಂದನೀಯ ಫ್ರೋಲಿಸ್ ಫೆರ್ನಾಂಡಿಸ್, ಶೋಕಮಾತಾ ಇದಗರ್ಜಿಯ ಸಹಾಯಕ್ ಧರ್ಮಗುರು ವಂದನೀಯ ರೊಯ್ಸನ್ ಫೆರ್ನಾಂಡಿಸ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಯ್ಸ್ ಡೆಸಾ, ಶಾಲಾ ನಾಯಕರಾದ ಕಾರ್ತಿಕ್ ಮತ್ತು ಆಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸ್ವಾಗತಿಸಿದರು. ಶಿಕ್ಷಕಿ ಆಗ್ನೆಸ್ ಪಿರೇರಾ ವಂದಿಸಿದರು. ಅನನ್ಯ ಕಾರ್ಯಕ್ರಮ ನಿರೂಪಿಸಿದರು.

********************************************

ಸೈಂಟ್ ಮೇರಿಸ್ ಹಿ. ಪ್ರಾ. ಶಾಲೆಯಲ್ಲಿ ವನಮಹೋತ್ಸವ

ಸೈಂಟ್ ಮೇರಿಸ್ ಹಿ.ಪ್ರಾ. ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವು ಮುಖ್ಯ ಶಿಕ್ಷಕಿ ಕ್ಲಾರಾ ಮಥಾಯಸ್ ರವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಮಹೇಶ್ ಎನ್. ಪತ್ತಾರ್, ಭಾರತ್ ಸೇವಾದಳ ಜಿಲ್ಲಾ ಸಂಘಟಕರು ಸಸಿಗಳನ್ನು ವಿತರಿಸಿ ಪರಿಸರ್ ರಕ್ಷಣೆ ಹಾಗೂ ಗಿಡಮರಗಳನ್ನು ಬೆಳೆಸಿ ಪೋಷಿಸಲು ಕರೆಯಿತ್ತರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಶೇಖರ ಪೂಜಾರಿ ಹಿರಿಯ ಶಿಕ್ಷಕರಾದ ಲೀನ ಫೆರ್ನಾಂಡಿಸ್, ಹೆರಾಲ್ಡ್ ಆರ್. ಡಿಸೋಜಾ ಉಪಸ್ಥಿತರಿದ್ದರು. ಕುಮಾರಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಪ್ರತಾಪ್ ಧನ್ಯವಾದವಿತ್ತರು. ದಿಶಾ ಪಿ.ಯು. ಕಾರ್‍ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಬಗ್ಗೆ ಭಾಷಣ, ಹಾಡು, ಅಭಿನಯ, ನೃತ್ಯ ಕಾರ್ಯಕ್ರಮಗಳು ನಡೆದವು.

 
         
 
   
 

Copyright@ 2008-2013 Mother of Sorrows Church, Udupi.  All rights reserved. Designed@Maldives Computers